ವಿನೋದ್ ಪ್ರಭಾಕರ್ ನಟನೆಯ ಫೈಟರ್ ಚಿತ್ರಕ್ಕೆ``ಡಿ ಬಾಸ್``ದರ್ಶನ್ ಬೆಂಬಲ:
Posted date: 05 Thu, Oct 2023 03:23:02 PM
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಮರಿ ಟೈಗರ್ ವಿನೋದ್ ಪ್ರಭಾಕರ್ ನಡುವೆ ಇರುವ ಉತ್ತಮ ಸ್ನೇಹ ಸಂಬಂಧ ಮತ್ತು ಬಾಂಧವ್ಯ ಎಲ್ಲರಿಗೂ ಗೊತ್ತಿರುವ ಸಂಗತಿ.

ದರ್ಶನ್ ಅವರನ್ನು ವಿನೋದ್ ಪ್ರಭಾಕರ್ ಡಿ ಬಾಸ್ ಎಂದು ಕರೆದರೆ ಅದಕ್ಕೆ ಪ್ರತಿಯಾಗಿ ದರ್ಶನ್, ವಿನೋದ್ ಪ್ರಭಾಕರ್ ಅವರನ್ನು ಟೈಗರ್ ಎಂದೇ ಪ್ರೀತಿಯಿಂದ ಕರೆಯುತ್ತಾರೆ ಈ ಕಾರಣಕ್ಕೆ ದರ್ಶನ್ ಅವರನ್ನು ಸಹೋದರನ ರೀತಿ ಹೆಚ್ಚು ಪ್ರೀತಿ ಗೌರವದಿಂದ ಕಾಣುತ್ತಾರೆ ನಟ ವಿನೋದ್ ಪ್ರಭಾಕರ್.
 
ಕೆ.ಎಸ್ ಸೋಮಶೇಖರ್ ನಿರ್ಮಾಣ ಮಾಡಿರುವ ಬಹು ನಿರೀಕ್ಷಿತ ಚಿತ್ರ ಫೈಟರ್ ಗೆ ನಟ ದರ್ಶನ್ ಪ್ರೀತಿಯಿಂದ ಹರಸಿಸದ್ದಾರೆ. ನಾಳೆ ಅಕ್ಟೋಬರ್ 6 ರಂದು ಚಿತ್ರ ತೆರೆಗೆ ಬರಲಿದ್ದು ಎಲ್ಲರೂ ಫೈಟರ್ ಚಿತ್ರ ನೋಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ದರ್ಶನ್ ಅವರು ಅಭಿಮಾನಿಗಳಿಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಫೈಟರ್ ಚಿತ್ರಕ್ಕೆ ಆನೆ ಬಲ ಬಂದಿದೆ. ಇದೇ ಕಾರಣಕ್ಕಾಗಿ ನಟ ವಿನೋದ್ ಪ್ರಭಾಕರ್, ನಿರ್ಮಾಪಕ ಕೆ.ಎಸ್ ಸೋಮಶೇಖರ್, ಚಿತ್ರ ಪ್ರಚಾರದ ಉಸ್ತುವಾರಿ ವಹಿಸಿರುವ ಮುನೀಂದ್ರ, ನಿರ್ದೇಶಕ ಉಮೇರ್ಶ ಸೇರಿದಂತೆ  ಚಿತ್ರತಂಡದ ಮುಖದಲ್ಲಿ ಮಂದಹಾಸ ಮೂಡಿಸಿದೆ.

ನವಗ್ರಹ ಚಿತ್ರದಲ್ಲಿ ನಟ ದರ್ಶನ್ ಅವರು ಖಳ ನಟರ ಮಕ್ಕಳನ್ನು ಹಾಕಿಕೊಂಡು ಸಿನಿಮಾ ಮಾಡಿದ್ದರು ಅಲ್ಲಿಂದ ದರ್ಶನ್ ಮತ್ತು ವಿನೋದ್ ಪ್ರಭಾಖರ್ ಅವರ ನಡುವಿನ ಸ್ನೇಹ ಸಂಬಂಧ ಉತ್ತವಾಗಿದೆ. ಇದೇ ಕಾರಣಕ್ಕೆ ನಟ ವಿನೋದ್ ಪ್ರಭಾಕರ್ ಅವನ್ನು ಮನೆಗೆ ಕರೆಸಿಕೊಂಡು ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಇದರಿಂದ ಚಿತ್ರತಂಡಕ್ಕೆ ಆನೆ ಬಲ ಬಂದಿದೆ, ನಾಳೆ ರಾಜ್ಯಾದ್ಯಂತ ಫೈಟರ್ ಚಿತ್ರ ತೆರೆಗೆ ಬರಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed